ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ।
ಬೇಕೆನುತ ಬೊಬ್ಬಿಡುತಲಿಹ ಘಟವನಿದನು ।।
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ।
ಸಾಕೆನಿಪುದೆಂದಿಗೆಲೊ ಮಂಕುತಿಮ್ಮ ।।
More, more, more of this, more of that.
Why did He create this drum of a body
That screams "More" all the time?
When will it say "No more"? --Mankuthimma
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು ।
ಮಗುವು ಪೆತ್ತರ್ಗೆ ನೀಂ ಲೋಕಕೆ ಸ್ಪರ್ಧಿ ।।
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ ನಿನ್ನ ।
ರಗಳೆಗಾರಿಗೆ ಬಿಡುವೊ ಮಂಕುತಿಮ್ಮ ।।
Gripe not that nobody cares for you:
You are a baby for your parents; for others you are another competitor.
When everyone in this world has a burden to carry,
Who wants to hear your grouse? --Mankuthimma
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ ।
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।
ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ।
ಒರಟು ಕೆಲಸವೊ ಬದುಕು ಮಂಕುತಿಮ್ಮ ।।
"This is not right, that is not correct":
Saying thus, spread not thorns on your bed.
So what if something is not perfect?
Life is but a rough job. --Mankuthimma
ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು ।
ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ ।।
ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳಿವು ।
ಅರಸು ಜೀವಿತ ಹಿತವ ಮಂಕುತಿಮ್ಮ ।।
Life is greater than all religions and truths.
Can a river in spate respect its banks?
The essence of religion is generic principles;
You [alone have to] seek what is good for you. --Mankuthimma
ಎಡವದೆಯೆ ಮೈಗಾಯವಡೆಯದೆಯೆ ಮಗುವಾರು ।
ನಡೆಯ ಕಲಿತವನು ಮತಿನೀತಿಗತಿಯಂತು ।।
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- ।
ದಡವಿಕೊಳುವವರೆಲ್ಲ ಮಂಕುತಿಮ್ಮ ।।
Which child learnt to walk without falling down?
This is how the mind learns wisdom too.
To slip, to fall, and to shake oneself and get up:
Isn't this what everyone does? --Mankuthimma
And this is the best one i liked...
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।।
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೊ ಮಂಕುತಿಮ್ಮ ।।
A monkey scratches a graze and turns it into a wound.
Worrying yourself to no end over an imperfection,
Cursing everything and making your mind a hell:
Is this misery a life too? --Mankuthimma